ನಿಜವಾದ ಶಿಕ್ಷಕರ ಜೊತೆ ಮಾತಾಡುವ ಹಾಗೆ ಇಂಗ್ಲಿಷ್ ಮಾತಾಡು

ನಿನ್ನ ಮಾತು ಕೇಳಿ, ತಪ್ಪುಗಳನ್ನು ತಕ್ಷಣ ತಿದ್ದುವ AI ಶಿಕ್ಷಕರ ಜೊತೆ ಸಹಜವಾಗಿ ಮಾತನಾಡು. ಮೂರೇ ದಿನಕ್ಕೆ ಕಲಿಕೆ ಬಿಟ್ಟುಬಿಡದಂತೆ ಆಟದ ಮಜಾ ನಿನ್ನ ಆಸಕ್ತಿಯನ್ನು ಉಳಿಸುತ್ತದೆ.

ಕಾರ್ಡ್ ಬೇಡ. ಎರಡೇ ನಿಮಿಷದಲ್ಲಿ ನಿನ್ನ ಮೊದಲ ಪಾಠ ಶುರು ಮಾಡು.

Tutoro ಟ್ಯೂಟರ್‌ಗೆ ಪರ್ಯಾಯವಷ್ಟೇ ಅಲ್ಲ, ಇನ್ನೂ ಉತ್ತಮ ಆಯ್ಕೆ. ಯಾಕೆ ಗೊತ್ತಾ?

ಶಿಕ್ಷಕರ ಜೊತೆ ಪಾಠ ಕಲಿಯುವಂತೆಯೇ Tutoro ಜೊತೆ ಇಂಗ್ಲಿಷ್ ಮಾತನಾಡಲು, ಕೇಳಿ ಅರ್ಥಮಾಡಿಕೊಳ್ಳಲು ಮತ್ತು ಓದಲು ಅಭ್ಯಾಸ ಮಾಡು.

  • ತಿಂಗಳಿಗೆ $400

    ಉಚಿತ

  • ವಾರಕ್ಕೆ ಎರಡು ಪಾಠಗಳು

    24/7

  • ಶಿಕ್ಷಕರ ಪಾಠದ ಯೋಜನೆ

    ನಿನಗೆ ತಕ್ಕಂತೆ ಬದಲಾಗುತ್ತದೆ

  • ನಿಜವಾದ ಪಾಠ, ಮಾತನಾಡುತ್ತಾ ಕಲಿ

    ನೀನು ಮಾತನಾಡು. ನಿನ್ನ ಶಿಕ್ಷಕರು ಉತ್ತರಿಸುತ್ತಾರೆ, ವಿವರಿಸುತ್ತಾರೆ, ಮಾತಿನ ನಡುವೆಯೇ ಅಭ್ಯಾಸಗಳನ್ನೂ ಕೊಡುತ್ತಾರೆ.

  • ನಿನಗೆ ಬೇಕಾದ ಸಂದರ್ಭಕ್ಕೆ ಅಭ್ಯಾಸ ಮಾಡು

    ಉದ್ಯೋಗದ ಸಂದರ್ಶನ, ವೈದ್ಯರ ಜೊತೆ ಮಾತುಕತೆ ಅಥವಾ ಸಾಹಸ ಕಥೆಯಲ್ಲಿ ಭಾಗವಹಿಸುವ ಅಭ್ಯಾಸ ಮಾಡು, ಇಲ್ಲವೇ ನಿನ್ನದೇ ಸನ್ನಿವೇಶ ಬರೆ.

  • ಯಾರ ಜೊತೆ ಮಾತನಾಡಬೇಕೆಂದು ನೀನೇ ಆರಿಸಿಕೋ

    ಒಬ್ಬೊಬ್ಬ ಶಿಕ್ಷಕರ ಉಚ್ಚಾರಣೆಯ ಶೈಲಿ, ಸ್ವಭಾವವೂ ಬೇರೆ. ನಿನಗೆ ಯಾರ ಜೊತೆ ಮಾತನಾಡಲು ಇಷ್ಟವೋ ಅವರನ್ನು ಆರಿಸಿಕೋ.

  • ಏನು ತಿದ್ದಿಕೊಳ್ಳಬೇಕು ಅಂತ ತಿಳಿದುಕೋ

    ಪ್ರತಿ ಪಾಠದ ನಂತರ ನಿನ್ನ ಅಂಕಗಳನ್ನು ನೋಡು. ಯಾವ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದೀಯೋ ತಿಳಿದುಕೋ.

  • ನೆನಪಿನಲ್ಲಿ ಉಳಿಯುವ ಪದಗಳು

    ನೀನು ಮರೆಯುವ ಹೊತ್ತಿಗೆ ಆ ಪದಗಳು ಚಿಕ್ಕ ಆಟಗಳಲ್ಲಿ ಮತ್ತೆ ಬರುತ್ತವೆ, ಚೆನ್ನಾಗಿ ನೆನಪಿನಲ್ಲಿ ಉಳಿಯುವವರೆಗೂ.

  • ಬರೀ ಸ್ಕ್ರೋಲ್ ಅಲ್ಲ, ಕಲಿಕೆಯ ಹಾದಿ

    ಪ್ರತಿ ಪಾಠ ಮುಗಿಸಿದಾಗಲೂ ನಕ್ಷೆಯಲ್ಲಿ ಮುಂದೆ ಸಾಗುತ್ತೀಯ, ಒಂದು ಜಗತ್ತನ್ನು ಮುಗಿಸಿದರೆ ಮುಂದಿನದು ತೆರೆದುಕೊಳ್ಳುತ್ತದೆ.

  • ಮುಂದಿನ ಹಂತಕ್ಕೇರು. ಆಟದಲ್ಲೂ!

    ನಿನ್ನದೇ ಪಾತ್ರವನ್ನು ಸೃಷ್ಟಿಸು, ಪ್ರತಿ ಪಾಠದೊಂದಿಗೆ ಅದರ ಮಟ್ಟ ಏರುತ್ತದೆ, ಮೇಲಿನ ಲೀಗ್‌ಗಳತ್ತ ಸಾಗುತ್ತದೆ.

ಪಾಠ

ನಿನಗಾಗಿ ಯಾವಾಗಲೂ ಸಮಯವಿರುವ ಶಿಕ್ಷಕ

ನಿನ್ನ ಮಟ್ಟಕ್ಕೆ ತಕ್ಕ 10 ನಿಮಿಷಗಳ ಪಾಠಗಳು, ನಿನಗೆ ಅನುಕೂಲವಾದಾಗ ಕಲಿ. ಹೆಚ್ಚಿನ ಕೋರ್ಸ್‌ಗಳಲ್ಲಿ ಮಾತನಾಡುವ ಅಭ್ಯಾಸಕ್ಕೆ ಅಷ್ಟಾಗಿ ಅವಕಾಶವಿಲ್ಲ, ಇಲ್ಲಿ ಪ್ರತಿ ಪಾಠದಲ್ಲೂ ಮಾತನಾಡುತ್ತಲೇ ಕಲಿಯುತ್ತೀಯ.

  • ನಿನ್ನ ಶಿಕ್ಷಕರನ್ನು ಆರಿಸು

    ನಿನಗೆ ಇಷ್ಟವಾದ ಉಚ್ಚಾರಣೆ ಮತ್ತು ಸ್ವಭಾವದ ಶಿಕ್ಷಕರನ್ನು ಆರಿಸು. ಬೇರೆಯವರು ಬೇಕೆನಿಸಿದರೆ ಒಂದೇ ಟ್ಯಾಪ್‌ನಲ್ಲಿ ಬದಲಿಸು.

  • ಮಾತನಾಡಲು ಶುರುಮಾಡು

    ನೀನು ಮಾತನಾಡುತ್ತಾ ಹೋದಂತೆ ಶಿಕ್ಷಕರು ನಡುವೆ ಚಿಕ್ಕ ಚಿಕ್ಕ ಅಭ್ಯಾಸಗಳನ್ನು ಕೊಡುತ್ತಾರೆ. ಉರು ಹೊಡೆಯಬೇಕಿಲ್ಲ, ಬೋರ್ಡ್ ಮೇಲಿನ ನಿಯಮಗಳನ್ನು ಕಂಠಪಾಠ ಮಾಡಬೇಕಿಲ್ಲ.

  • ನಿನ್ನ ಫಲಿತಾಂಶ ನೋಡು

    ನಿನ್ನ ಪ್ರತಿ ಉತ್ತರದ ನಂತರ ಶಿಕ್ಷಕರು ತಪ್ಪುಗಳನ್ನು ತಿದ್ದುತ್ತಾರೆ. ಕೊನೆಯಲ್ಲಿ ಸಿಗುವ ವರದಿ ನೀನು ಇನ್ನೂ ಯಾವುದನ್ನು ಅಭ್ಯಾಸ ಮಾಡಬೇಕು ಎಂದು ತಿಳಿಸುತ್ತದೆ.

  • ನಕ್ಷೆಯಲ್ಲಿ ಮುಂದೆ ಸಾಗು

    XP ಗಳಿಸು, ನಕ್ಷೆಯಲ್ಲಿ ಮುಂದಿನ ತಾಣಕ್ಕೆ ದಾರಿ ತೆರೆ. ನಿನಗೆ ಇನ್ನೂ ಕಷ್ಟವೆನಿಸುವ ಪದಗಳು ಮುಂದೆ ಆಟಗಳಲ್ಲಿ ಮತ್ತೆ ಸಿಗುತ್ತವೆ.

  • ಮಾತನಾಡುವುದು

  • ಕೇಳಿ ಅರ್ಥಮಾಡಿಕೊಳ್ಳುವುದು

  • ಸಂದರ್ಭಕ್ಕೆ ತಕ್ಕ ಪದಬಳಕೆ

  • ಬಾಯಿಪಾಠವಿಲ್ಲದೆ ವ್ಯಾಕರಣ

ಒಂದು ಪಾಠ ನೋಡು

20+ ಶಿಕ್ಷಕರ ಜೊತೆ ಬೇರೆ ಬೇರೆ ಸಂದರ್ಭಗಳಲ್ಲಿ ಇಂಗ್ಲಿಷ್ ಮಾತಾಡಲು ಅಭ್ಯಾಸ ಮಾಡು

ಮಾತನಾಡು, ಟೈಪ್ ಮಾಡು, ಅಭ್ಯಾಸ ಮಾಡು. ನಿನ್ನ AI ಶಿಕ್ಷಕರು ತಪ್ಪುಗಳನ್ನು ತಕ್ಷಣ ತಿದ್ದುತ್ತಾರೆ, ಹಾಗಾಗಿ ದಿನನಿತ್ಯದ ಯಾವುದೇ ಸನ್ನಿವೇಶದಲ್ಲೂ ನೀನು ಧೈರ್ಯವಾಗಿ ಇಂಗ್ಲಿಷ್ ಮಾತನಾಡಬಹುದು.

  • Sophia

  • Margaret

  • ಕೈ

ಇನ್ನಷ್ಟು

  • ಧ್ವನಿ ರೆಕಾರ್ಡಿಂಗ್

    I'd like a table for two, please.

  • ಉತ್ತರ ಟೈಪ್ ಮಾಡು

    Could we sit by the window?

  • ವಾಕ್ಯ ರಚಿಸು

    Seven o clock works for us

ನಿನ್ನ ಪಾತ್ರವನ್ನು ರೂಪಿಸು, ನಿನ್ನಿಷ್ಟದಂತೆ ಸಿಂಗರಿಸು

ನೀನೇ ನಾಯಕನಾದಾಗ ಕಲಿಯುವುದೂ ಆಟದಷ್ಟೇ ಖುಷಿ. ನಿನ್ನ ಪಾತ್ರವನ್ನು ರಚಿಸು, ಕಲಿಕೆಯಲ್ಲಿ ಮುಂದೆ ಸಾಗುತ್ತಾ ಹೊಸ ಬಟ್ಟೆ, ಅಲಂಕಾರ ಸಾಮಗ್ರಿಗಳನ್ನು ಪಡೆದುಕೋ.

  • ಕನ್ನಡಕ

  • ಟೋಪಿಗಳು

  • ಮೇಲಂಗಿ

  • ಕೆಳ ಉಡುಪು

  • ಶೂಗಳು

  • ಮುಖ

  • ಹುಬ್ಬುಗಳು

  • ಮೂಗು

  • ತುಟಿಗಳು

ಪಾಠಗಳು ಪಟ್ಟಿಯಲ್ಲಲ್ಲ, ನಕ್ಷೆಯಲ್ಲಿ

ಪಾಠಗಳ ಪಟ್ಟಿ ನೋಡುತ್ತಾ ಹೋಗುವ ಬದಲು, ಹೊಸ ಜಾಗಗಳನ್ನು ಸುತ್ತುತ್ತಾ ಕಲಿ. ಪ್ರತಿ ಪಾಠದಲ್ಲೂ ದಿನನಿತ್ಯದ ಸಂದರ್ಭವೊಂದನ್ನು ಅಭ್ಯಾಸ ಮಾಡು; ನೀನು ತೆರೆಯುವ ಪ್ರತಿ ಹೊಸ ಪ್ರದೇಶವೂ ನಿನ್ನ ಕಲಿಕೆಯ ಪ್ರಗತಿಯನ್ನು ತೋರಿಸುತ್ತದೆ.

ಪ್ರತಿ ದ್ವೀಪದಲ್ಲೂ ಒಂದು ಪಾಠವಿದೆ. ಒಂದನ್ನು ಮುಗಿಸಿದರೆ ಮುಂದಿನದು ತೆರೆದುಕೊಳ್ಳುತ್ತದೆ, ಹಾಗಾಗಿ ಮುಂದೆ ಏನು ಕಲಿಯಬೇಕು ಎಂದು ಯೋಚಿಸಬೇಕಿಲ್ಲ.

Word Battle

  • ಹುಲ್ಲುಗಾವಲು

    • ಮೊದಲ ಪದಗಳು

    • ಸಂಖ್ಯೆಗಳು ಮತ್ತು ಸಮಯ

    • ಕಾಫಿ ಆರ್ಡರ್ ಮಾಡುವುದು

    • ಹೊಸ ಪರಿಚಯ

  • ಮರುಭೂಮಿ

    • ದಾರಿ ಕೇಳುವುದು

    • ಹೋಟೆಲ್‌ನಲ್ಲಿ ಚೆಕ್ ಇನ್

    • ಇಬ್ಬರಿಗೆ ರಾತ್ರಿ ಊಟ

    • ಏನೋ ಎಡವಟ್ಟಾಯಿತು

  • ಬೆಟ್ಟ

    • ನಿನ್ನ ಕೆಲಸದ ಬಗ್ಗೆ ಹೇಳುವುದು

    • ನಯವಾಗಿ ಆಕ್ಷೇಪಿಸುವುದು

    • ಸಂದರ್ಶನದಲ್ಲಿ ಉತ್ತರಿಸುವುದು

    • ಮುಜುಗರವಿಲ್ಲದ ಹರಟೆ

  • ಹಿಮ

    • ಇನ್ನೊಬ್ಬರ ಅಭಿಪ್ರಾಯ ಬದಲಿಸುವುದು

    • ಯೋಚಿಸುತ್ತಾ ಮಾತನಾಡುವುದು

    • ದಿನನಿತ್ಯದ ಮಾತಿನಲ್ಲಿ ನುಡಿಗಟ್ಟುಗಳು

    • ಹಿಂಜರಿಯದೆ ಮಾತನಾಡುವುದು

Word Battle

Word Battles ಆಡು, ನಿಜವಾದ ಆಟಗಾರರನ್ನು ಸೋಲಿಸು

ಹಿಂದಿನ ಪಾಠಗಳಲ್ಲಿ ಕಲಿತ ಪದಗಳಿಗೆ 60 ಸೆಕೆಂಡ್‌ಗಳಲ್ಲಿ ನಿನ್ನ ಎದುರಾಳಿಗಿಂತ ಹೆಚ್ಚು ಸರಿಯಾದ ಉತ್ತರಗಳನ್ನು ಕೊಡು. ಗೆದ್ದರೂ ಸೋತರೂ, ಆ ಪದಗಳು ನಿನಗೆ ಇನ್ನಷ್ಟು ಚೆನ್ನಾಗಿ ನೆನಪಿರುತ್ತವೆ.

ನೀನು

Marta

  • ದುಪ್ಪಟ್ಟು XP

  • ಗುರಾಣಿ

  • ಹೆಚ್ಚುವರಿ ಸಮಯ

ಸರಿಯಾದ ಪದವನ್ನು ಆರಿಸು

  • gentle

  • ಹೇರಳವಾದ

ಬಹುಮಾನಗಳನ್ನು ಸಂಗ್ರಹಿಸು, ಉತ್ಸಾಹ ಉಳಿಸಿಕೋ

ಪ್ರತಿ ಬಹುಮಾನ ಸಿಕ್ಕಾಗಲೂ ನಾಳೆ ಮತ್ತೆ ಬರಬೇಕು ಅನಿಸುತ್ತೆ.

  • Streak

    ಒಂದು ದಿನ ತಪ್ಪಿಸಿದರೂ ಜ್ವಾಲೆ ಆರಿಹೋಗುತ್ತದೆ. ನಿಯಮ ಇಷ್ಟೇ, ಆದರೆ ನೀನು ಪ್ರತಿದಿನ ಮರಳಿ ಬರಲು ಇದೇ ಸಾಕು.

  • XP

    ಪ್ರತಿ ಪಾಠ, ಹಣಾಹಣಿ ಮತ್ತು ಸ್ಟೋರಿಯಿಂದ XP ಗಳಿಸು. ವಾರದ ಲೀಗ್‌ನಲ್ಲಿ ನಿನ್ನ ಸ್ಥಾನವನ್ನು ನಿರ್ಧರಿಸುವುದು ಈ XP.

  • Almases

    ಕಲಿಯುತ್ತಾ Almases ಗಳಿಸು. ಶಿಕ್ಷಕರು, ವಸ್ತುಗಳು ಮತ್ತು ಬೂಸ್ಟ್‌ಗಳನ್ನು ಪಡೆಯಲು ಅವನ್ನು ಬಳಸು.

ನಿನಗೆ ಅನುಕೂಲವಾದಾಗ

ಆಟವಾಡುತ್ತಾ ಪದಗಳನ್ನು ಕಲಿ, ಇಂಟರ್ಯಾಕ್ಟಿವ್ ಸ್ಟೋರಿಗಳನ್ನು ಓದು

ನೀನು ಪದೇಪದೇ ತಪ್ಪು ಮಾಡುವ ಪದಗಳನ್ನೇ Word Rider ಆಟದಲ್ಲಿ ಅಭ್ಯಾಸ ಮಾಡು. ಸ್ಟೋರಿಗಳಲ್ಲಿ ಓದುವುದನ್ನು ಕೇಳು, ಯಾವುದೇ ಪದವನ್ನು ತಟ್ಟಿ ಅದರ ಅರ್ಥ ತಿಳಿದುಕೋ, ಪ್ರಶ್ನೆಗಳಿಗೆ ಉತ್ತರಿಸು.

ಲೀಗ್‌ಗಳಲ್ಲಿ ಮೇಲಕ್ಕೇರು, ಇಂಗ್ಲಿಷ್‌ನಲ್ಲೂ ಮುಂದೆ ಹೋಗು

A1 → B2

ಪ್ರತಿ ಸೋಮವಾರ ನೀನು 30 ಕಲಿಯುವವರ ಗುಂಪು ಸೇರುತ್ತೀಯ; ಗಳಿಸಿದ XP ಆಧಾರದ ಮೇಲೆ ನಿನ್ನ ಸ್ಥಾನ ನಿರ್ಧಾರವಾಗುತ್ತದೆ. ವಾರದ ಕೊನೆಯಲ್ಲಿ ಮೊದಲ ಕೆಲವು ಸ್ಥಾನಗಳಲ್ಲಿದ್ದರೆ ಮೇಲಿನ ಲೀಗ್‌ಗೆ ಹೋಗುತ್ತೀಯ, ಕೊನೆಯ ಕೆಲವು ಸ್ಥಾನಗಳಲ್ಲಿದ್ದರೆ ಕೆಳಗಿನ ಲೀಗ್‌ಗೆ ಇಳಿಯುತ್ತೀಯ.

ನಿನ್ನ ಆರಂಭ ಇಲ್ಲಿಂದ

Bronze ಲೀಗ್‌ನಿಂದ ಕೆಳಗಿಳಿಯುವ ಭಯವಿಲ್ಲ. ಒಟ್ಟು ಹತ್ತು ಲೀಗ್‌ಗಳಿವೆ, ನೀನು ಮೇಲಿನ ಲೀಗ್‌ಗೆ ಹೋದಾಗಲೆಲ್ಲ Almases ಸಿಗುತ್ತವೆ.

  • Bronze

  • Silver

  • Gold

  • Sapphire

  • Ruby

ಇಲ್ಲಿದೆ ಕಲಿಯುವವರ ಅಭಿಪ್ರಾಯ

ಒಂದು ವಾರದ ನಂತರವೂ ಕಲಿಕೆ ಮುಂದುವರಿಸಿದವರು ಹೇಳೋದು ಹೀಗೆ.

  • ಕೊನೆಗೂ ನನ್ನಿಂದ ಇಂಗ್ಲಿಷ್ ಮಾತನಾಡಿಸುವ ಆ್ಯಪ್ ಸಿಕ್ಕಿತು!

    L.K.

  • AI ಶಿಕ್ಷಕರ ಜೊತೆ ಮಾತುಕತೆ ಇಷ್ಟು ಸಹಜವಾಗಿರುತ್ತದೆ ಅಂದುಕೊಂಡಿರಲಿಲ್ಲ. ಮಾತನಾಡಿಯೇ ಉತ್ತರ ಕೊಡಬಹುದು, ಮಾತುಕತೆಯ ನಡುವೆಯೇ ವಿವರಣೆಯನ್ನೂ ಕೇಳಿ ತಿಳಿದುಕೊಳ್ಳಬಹುದು ಅನ್ನೋದು ನನಗೆ ಇಷ್ಟ.

    M.R.

  • ಭಾಷೆ ಕಲಿಯಲು ಹಲವು ಆ್ಯಪ್‌ಗಳನ್ನು ಪ್ರಯತ್ನಿಸಿದ್ದೇನೆ. ಹೆಚ್ಚಿನವುಗಳಲ್ಲಿ ಒಂದು ವಾರಕ್ಕೇ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡಿದಂತಾಗಿ ಬೇಸರ ಬರುತ್ತಿತ್ತು. Tutoro ಹೆಚ್ಚು ಆಸಕ್ತಿಕರವಾಗಿದೆ, ಮಾತುಕತೆಯ ನಡುವೆಯೇ ಅಭ್ಯಾಸಗಳೂ ಬರುತ್ತವೆ.

    A.S.

  • ಎಲ್ಲಕ್ಕಿಂತ ನನಗೆ ಇಷ್ಟ ಆಗಿದ್ದು ಮಾತನಾಡುವ ಅಭ್ಯಾಸ.

    N.P.

  • ಓದುತ್ತಿದ್ದೇನೆ ಅನ್ನೋದಕ್ಕಿಂತ ಆಟ ಆಡುತ್ತಿದ್ದೇನೆ ಅನಿಸುತ್ತದೆ. ಅದಕ್ಕೇ ಪ್ರತಿದಿನ ಮತ್ತೆ ಬರಬೇಕು ಅನಿಸುತ್ತದೆ.

    D.M.

  • ಇರುವ ಜಾಗಕ್ಕೆ ತಕ್ಕಂತೆ ಮಾತನಾಡಬಹುದು, ಇಲ್ಲವೇ ಟೈಪ್ ಮಾಡಬಹುದು. ಈ ಆಯ್ಕೆ ನನಗೆ ತುಂಬ ಇಷ್ಟ.

    S.T.

  • ಪಾಠಗಳು ಚಿಕ್ಕದಾಗಿವೆ, ವಿಷಯಕ್ಕೆ ನೇರವಾಗಿ ಬರುತ್ತವೆ, ಸುಲಭವಾಗಿ ಅರ್ಥವಾಗುತ್ತವೆ. ಸಾಮಾನ್ಯವಾಗಿ ಬಿಡುವಿನ ವೇಳೆಯಲ್ಲಿ ಒಂದು ಪಾಠ ಮುಗಿಸುತ್ತೇನೆ. ಅದಕ್ಕಾಗಿ ತುಂಬಾ ಸಮಯ ಮೀಸಲಿಡಬೇಕೆನಿಸುವುದಿಲ್ಲ.

    J.B.

  • ಶಿಕ್ಷಕರು ನನ್ನ ತಪ್ಪುಗಳನ್ನು ತುಂಬ ಸರಳವಾಗಿ ವಿವರಿಸುತ್ತಾರೆ. ಉತ್ತರ ತಪ್ಪಾದರೂ ಗೊಂದಲವಾಗುವುದಿಲ್ಲ, ಏನು ಸರಿಪಡಿಸಬೇಕು ಅಂತ ತಕ್ಷಣ ಗೊತ್ತಾಗುತ್ತದೆ.

    E.K.

  • ನನಗೆ ಬಹುಶಃ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗುವುದು Word Battles. ಇನ್ನೊಬ್ಬರ ಜೊತೆ ಸ್ಪರ್ಧಿಸುತ್ತಾ ಪದಗಳನ್ನು ಅಭ್ಯಾಸ ಮಾಡುವುದೇ ಒಂದು ಮಜಾ.

    R.V.

  • ದ್ವೀಪದ ನಕ್ಷೆಯಲ್ಲಿ ನಾನು ಎಷ್ಟು ಮುಂದೆ ಬಂದಿದ್ದೇನೆ ಅಂತ ನೋಡಿದಾಗ ತುಂಬ ಖುಷಿಯಾಗುತ್ತೆ.

    C.N.

  • ಮೊದಲು ಇಂಗ್ಲಿಷ್ ಚೆನ್ನಾಗಿ ಅರ್ಥವಾಗುತ್ತಿತ್ತು, ಆದರೆ ಮಾತನಾಡಲು ಕಷ್ಟವಾಗುತ್ತಿತ್ತು. Tutoro ಬಳಸಿ ನಿಯಮಿತವಾಗಿ ಅಭ್ಯಾಸ ಮಾಡಿದ ಮೇಲೆ, ಈಗ ಮಾತನಾಡಿ ಉತ್ತರಿಸಲು ಹೆಚ್ಚು ಹಿಂಜರಿಕೆ ಆಗುವುದಿಲ್ಲ.

    I.G.

  • ಸ್ಟೋರಿಗಳು ಸರಳವಾಗಿವೆ, ಉಪಯುಕ್ತವಾಗಿವೆ, ನೋಡಲೂ ತುಂಬ ಚೆನ್ನಾಗಿವೆ. ಗೊತ್ತಿಲ್ಲದ ಪದವನ್ನು ತಟ್ಟಿದರೆ ಅದರ ಅರ್ಥ ತಿಳಿಯುತ್ತದೆ ಅನ್ನೋದು ನನಗೆ ತುಂಬ ಇಷ್ಟ.

    F.L.

  • ಇಲ್ಲಿಯವರೆಗೆ ಬಳಸಿದ ಇಂಗ್ಲಿಷ್ ಕಲಿಕೆಯ ಆ್ಯಪ್‌ಗಳಲ್ಲಿ ಇದೇ ಹೆಚ್ಚು ಮಜಾ ಅನಿಸುತ್ತೆ.

    T.A.

  • ಎಲ್ಲ ಮಾತುಗಳನ್ನೂ ಮೊದಲೇ ಬರೆದಿಟ್ಟಂತೆ ಅನಿಸುವುದಿಲ್ಲ ಅನ್ನೋದು ನನಗೆ ಇಷ್ಟ. ಕೆಲವೊಮ್ಮೆ ನಾನು ಇದ್ದಕ್ಕಿದ್ದಂತೆ ಬೇರೆ ಏನಾದರೂ ಕೇಳಿದರೂ, ಶಿಕ್ಷಕರು ಸಹಜವಾಗಿಯೇ ಮಾತು ಮುಂದುವರಿಸುತ್ತಾರೆ.

    V.H.

  • ಉಚ್ಚಾರಣೆಯ ಅಭ್ಯಾಸ ಮಾಡುವಾಗ, ಇಷ್ಟು ವರ್ಷಗಳಿಂದ ಮಾಡುತ್ತಿದ್ದ ತಪ್ಪುಗಳು ನನಗೇ ಗೊತ್ತಾದವು.

    P.D.

  • ಈಗ ದಿನವೂ ಇಂಗ್ಲಿಷ್ ಕಲಿಯುತ್ತೇನೆ. ಅದೊಂದು ಅಭ್ಯಾಸವೇ ಆಗಿಬಿಟ್ಟಿದೆ.

    G.S.

  • Streak, ಲೀಗ್‌ಗಳು, ಬಹುಮಾನಗಳು ನನ್ನನ್ನು ನಿಜವಾಗಿಯೂ ಹುರಿದುಂಬಿಸುತ್ತವೆ. ಮಾತನಾಡುವ ಅಭ್ಯಾಸಕ್ಕಾಗಿ ಆ್ಯಪ್ ಡೌನ್‌ಲೋಡ್ ಮಾಡಿದ್ದೆ. ಕಲಿಕೆಯಲ್ಲಿರುವ ಆಟದ ಮಜಾದಿಂದ ಈಗ ತಪ್ಪದೆ ಅಭ್ಯಾಸ ಮಾಡುತ್ತಿದ್ದೇನೆ.

    B.R.

  • ಪಾಠ ಮಾಡುವ ಮನಸ್ಸಿಲ್ಲದೆ, ಸುಮ್ಮನೆ ಇಂಗ್ಲಿಷ್‌ನಲ್ಲಿ ಮಾತನಾಡಿ ಅಭ್ಯಾಸ ಮಾಡಬೇಕು ಅನಿಸಿದಾಗ ‘ಮುಕ್ತ ಮಾತುಕತೆ’ ತುಂಬಾ ಚೆನ್ನಾಗಿ ಕೆಲಸಕ್ಕೆ ಬರುತ್ತದೆ.

    K.M.

  • ನನಗೆ ಎಷ್ಟು ಬರುತ್ತದೆ ಅನ್ನೋದಕ್ಕೆ ತಕ್ಕಂತೆ ಪಾಠಗಳು ಸಿಗುತ್ತವೆ. ಮೊದಲ ಹಂತದ ಪಾಠಗಳನ್ನೇ ಮತ್ತೆ ಮತ್ತೆ ಮಾಡಬೇಕಾಗಿಲ್ಲ.

    H.C.

  • ಯಾವಾಗ ಬೇಕಾದರೂ ಶಿಕ್ಷಕರನ್ನು ಪ್ರಶ್ನೆ ಕೇಳಬಹುದು ಅನ್ನೋದು ನನಗೆ ತುಂಬಾ ಇಷ್ಟ. ಬರೀ ಅಭ್ಯಾಸಗಳನ್ನು ಮಾಡುವ ಆ್ಯಪ್‌ಗಿಂತ, ನನಗಾಗಿಯೇ ಒಬ್ಬ ಶಿಕ್ಷಕರಿರುವಂತೆ ಅನಿಸುತ್ತದೆ.

    O.J.

  • ಮಾತುಕತೆ, ಆಟಗಳು, ಸ್ಟೋರಿಗಳು ಎಲ್ಲವೂ ಸೇರಿ ಕಲಿಯಲು ಖುಷಿಯಾಗುತ್ತದೆ. ಒಂದಷ್ಟು ವೈವಿಧ್ಯ ಇರುವುದರಿಂದ ದಿನವೂ ಅದನ್ನೇ ಮಾಡುತ್ತಿದ್ದೇನೆ ಅಂತ ಅನಿಸುವುದಿಲ್ಲ.

    W.P.

  • ಕೆಲವೇ ವಾರಗಳಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಇಂಗ್ಲಿಷ್ ಮಾತನಾಡಲು ಶುರು ಮಾಡಿದ್ದೇನೆ. ಎಲ್ಲಕ್ಕಿಂತ ದೊಡ್ಡ ಬದಲಾವಣೆ ಅಂದರೆ, ಈಗ ಪ್ರತಿ ವಾಕ್ಯವನ್ನೂ ಮನಸ್ಸಿನಲ್ಲೇ ಅನುವಾದಿಸಿಕೊಂಡು ಮಾತನಾಡಬೇಕಾಗಿಲ್ಲ.

    M.C.

  • ಭಾಷೆ ಕಲಿಯುವ ಬೇರೆ ಆ್ಯಪ್‌ಗಳಿಗಿಂತ ಇಲ್ಲಿ ಮಾತುಕತೆ, ಚಟುವಟಿಕೆಗಳು ತುಂಬ ಹೆಚ್ಚು.

    Y.R.

  • AI ಜೊತೆ ಮಾತನಾಡಲೆಂದೇ ಮತ್ತೆ ಮತ್ತೆ ಆ್ಯಪ್ ತೆರೆಯುತ್ತೇನೆ. ಯಾರಾದರೂ ಒಬ್ಬರ ಜೊತೆ ನೇರವಾಗಿ ಮಾತನಾಡಿದಾಗ ಸಿಗುವಂಥ ಅಭ್ಯಾಸ ಇಲ್ಲೂ ಸಿಗುತ್ತದೆ.

    A.N.

  • Word Rider ಆಡೋಕೆ ಶುರು ಮಾಡಿದ್ರೆ ನಿಲ್ಲಿಸೋದೇ ಕಷ್ಟ.

    D.K.

  • ಈಗ ಮುಂದಿನ ಪಾಠಕ್ಕಾಗಿ ಕಾಯುವಷ್ಟು ಆಸಕ್ತಿ ಬಂದಿದೆ. ಈ ಮೊದಲು ಯಾವ ಇಂಗ್ಲಿಷ್ ಕೋರ್ಸ್‌ನಲ್ಲೂ ನನಗೆ ಹೀಗೆ ಅನಿಸಿರಲಿಲ್ಲ.

    L.F.

  • ಇಂಗ್ಲಿಷ್ ಕಲಿಯಲು ಒಳ್ಳೆಯ ಹೊಸ ವಿಧಾನ. ಸಾಕಷ್ಟು ಅಭ್ಯಾಸವೂ ಆಗುತ್ತದೆ, ಆಟಗಳ ಮಜಾ ಇರುವುದರಿಂದ ಬೇಸರವೂ ಆಗುವುದಿಲ್ಲ.

    R.S.

  • ಮಾತನಾಡುವ ಅಭ್ಯಾಸಕ್ಕೆ ತುಂಬ ಒಳ್ಳೆಯದು. ಬೇರೆ ಬೇರೆ ಪಾತ್ರಗಳಲ್ಲಿ ಮಾತನಾಡಲು ಇನ್ನಷ್ಟು ಸನ್ನಿವೇಶಗಳನ್ನು ಸೇರಿಸಿದರೆ ಚೆನ್ನಾಗಿರುತ್ತದೆ.

    N.V.

  • ಒಟ್ಟಿನಲ್ಲಿ ತುಂಬಾ ಒಳ್ಳೆಯ ಆ್ಯಪ್. ಪಾಠಗಳನ್ನೂ ಚೆನ್ನಾಗಿ ರೂಪಿಸಿದ್ದಾರೆ. ಕೆಲವೊಮ್ಮೆ ಶಕ್ತಿ ಬೇಗ ಖಾಲಿಯಾಗುತ್ತದೆ ಅನಿಸಿದರೂ, ಅದರಿಂದ ವಾರವಿಡೀ ಸ್ವಲ್ಪ ಸ್ವಲ್ಪ ಅಭ್ಯಾಸ ಮಾಡುವಂತಾಗಿದೆ.

    E.T.

  • AI ಶಿಕ್ಷಕರು ಮತ್ತು ಮಾತನಾಡಲು ಅಭ್ಯಾಸ ಮಾಡಿಸುವ ಪಾಠಗಳು ತುಂಬ ಚೆನ್ನಾಗಿವೆ. ನನ್ನ ಅವತಾರಕ್ಕೆ ಇನ್ನಷ್ಟು ಬಟ್ಟೆಗಳು, ರೂಪ ಬದಲಿಸಲು ಇನ್ನಷ್ಟು ಆಯ್ಕೆಗಳು ಇದ್ದರೆ ಚೆನ್ನಾಗಿರುತ್ತಿತ್ತು.

    J.M.

ಇನ್ನೆರಡೇ ನಿಮಿಷದಲ್ಲಿ ನಿನ್ನ ಮೊದಲ ಪಾಠ ಶುರು

ಸೋಫಿಯಾ ನಿನಗಾಗಿ ಕಾಯುತ್ತಿದ್ದಾಳೆ. ಉಚಿತವಾಗಿ ಕಲಿ, ಕಾರ್ಡ್ ಬೇಡ.